'ಮಮ್ಮಾಯಿದೂತೆ, ಊರುಗುದಾತೆ, ನಂಬಿನಾಯಗ್ ವೈದ್ಯನಾತೆ' ಎಂಬ ಕೀರ್ತಿಯೊಂದಿಗೆ ತುಳುನಾಡಿನಾದ್ಯಂತ ಪ್ರಸದ್ಧವಾದ ಶ್ರೀ ಬಬ್ಬುಸ್ವಾಮಿ ಸತ್ಯದ ದೈವನೆಂದೇ ಸ್ಥಾನ ಚಾವಡಿ ಪಡೆದುಕೊಂಡು ಕಲೆಕಾರ್ನಿಕದೊಂದಿಗೆ ಮೆರೆಯುವ ಅದ್ಭುತ ಶಕ್ತಿ.
ನಂಬಿ ಬರುವ ಭಕ್ತರಿಗೆ ಭವರೋಗ ವೈದ್ಯನಾಗಿ, ಅಭಯ-ರಕ್ಷಣೆ ನೀಡುವ ಬಬ್ಬುಸ್ವಾಮಿ ರಾಜನ್ ದೈವಗಳ ಪ್ರತಿಷ್ಠೆಯನ್ನು ರಕ್ಷಿಸಿದ, ಬಬ್ಬರ್ಯ ದೈವಕ್ಕೆ ಸೂಕ್ತ ಸ್ಥಾನಮಾನ ನೀಡಿದ ಪರಾಕ್ರಮಿ. ಇಂತಹ ಗುಣ ವಿಶೇಷತೆಗಳೊಂದಿಗೆ ಪೂಜೆಗೊಳ್ಳುವ ಬಬ್ಬುಸ್ವಾಮಿ ಆರಾಧನಾ ಸ್ಥಾನಗಳಲ್ಲಿ ಮಣಿಪಾಲದ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರದ ದೈವಗಳ ದೈವಸ್ಥಾನ ಒಂದು. ಭಕ್ತಿ, ಶ್ರದ್ಧೆ, ನಿಷ್ಕಳಂಕ, ನಿಯಮ ಬದ್ಧ, ಮುಗ್ಧ ಕಟ್ಟುಕಟ್ಟಳೆಯ ಆಚರಣೆ ಮತ್ತು ಉಪಾಸನಾ ವಿಧಾನಗಳಿಗೆ ಒಲಿಯುವ, ಮನುಕುಲದ ರಕ್ಷಕನಾದ ಬಬ್ಬುಸ್ವಾಮಿ ಮಣಿಪಾಲದಲ್ಲೂ ತನ್ನ ಸ್ಥಾನ ಪಡೆದುದು ಒಂದು ವಿಶಿಷ್ಟ ಸಂದರ್ಭದಲ್ಲಿ.
ಮಣಿಪಾಲದಲ್ಲಿ ಅಭಿವೃದ್ಧಿ ಆರಂಭವಾಗಿ ಪ್ರಥಮ ಹಂತದ ಉದ್ಯೋಗ-ವಾಸ್ತವ್ಯ ಆರಂಭವಾದ ಬಳಿಕದ ದಿನಗಳಲ್ಲಿ ಪರಿಸರದಲ್ಲಿ ಕಂಡು ಬಂದ ಪ್ರತ್ಯಕ್ಷ ಮತ್ತು ಪರೋಕ್ಷ ಘಟನೆಗಳೇ ಕಾರಣವಾಗಿ ಪೈ ಬಂಧುಗಳ ಕೇಳಿಕೆಯಂತೆ ಮಣಿಪಾಲದ ಇಂಜಿನಿಯರಿಂಗ್ ಕಾಲೇಜನ ಬಳಿ ಗೋಳಿ ಮರದಡಿಯಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರವಾರ ದೈವಗಳನ್ನು ನಂಬಿ ಪೂಜಿಸಲು ಆರಂಭವಾಯಿತು. ಮುಂದೆ ಮಣಿಪಾಲದ ನಿವಾಸಿಗಳು ವಂತಿಗೆ ನೀಡುತ್ತಾ ಸಂಕ್ರಮಣಪೂಜೆ, ವಿಶೇಷ ದಿನಗಳಲ್ಲಿ ದರ್ಶನ ಸೇವೆಯನ್ನು ನಡೆಸುತ್ತಾ ಶ್ರೀ ಬಬ್ಬುಸ್ವಾಮಿಯ ಆರಾಧನೆ ಜಾತಿ ಬಾಂಧವರಿಂದ ಆರಂಭವಾಯಿತು. ಮಣಿಪಾಲ ದಾರಿಯಾಗಿ ಎತ್ತಿನಗಾಡಿಗಳಲ್ಲಿ ಸರಕು ಹೇರಿಕೊಂಡು ಉಡುಪಿ ಪೇಟೆಗೆ ಬರುವ ಹಾಗೂ ಕಾರ್ಕಳ ಮೂಲಕ ಘಟ್ಟದವರೆಗೆ ಹೋಗುವವರಿಂದ ವಂತಿಗೆ ಪಡೆದು, ಮಣಿಪಾಲದಲ್ಲಿ ವಾಸ್ತವ್ಯವಿರುವವರಿಂದ ಮತ್ತು ಪೈ ಬಂಧುಗಳಿಂದ ಸರ್ವ ಸಹಕಾರ ಪಡೆದು ಎರಡು ವರ್ಷಕ್ಕೊಮ್ಮೆ 'ಸಿರಿಸಿಂಗಾರದ ನೇಮ'ವನ್ನು ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಿಗೆ ನಡೆಸುತ್ತಾ ಮಣಿಪಾಲವೂ ಶ್ರೀ ಬಬ್ಬುಸ್ಥಾಮಿಯ ಜಾಗೃತ ಸ್ಥಾನವಾಯಿತು. ಮುಂದಿನ ದಿನಗಳಲ್ಲಿ ಮಣಿಪಾಲದ ಪೈ ಬಂಧುಗಳು ಮಣಿಪಾಲದ ನಿವಾಸಿಗಳಾಗಿರುವವರನ್ನು ಎಲ್ಲಾ ಸೇರಿಸಿ ಒಂದು ಸಮಿತಿಯನ್ನು ರಚಿಸಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಿಗೆ ಹೂನೀರು, ಸಂಕ್ರಮಣ ಪೂಜೆ, ದರ್ಶನ ಸೇವೆ ಮುಂತಾದ ವಾರ್ಷಿಕ ಪಂಚ ಪರ್ವಗಳು ಮತ್ತು ವಿಜೃಂಭಣೆಯ ನೇಮ ನಡೆಯುವ ವ್ಯವಸ್ಥೆಯಾಯಿತು.
ಈ ಆರಂಭದ ಕಮಿಟಿಯನ್ನು ರಚಿಸಿ ಸುವವಸ್ಥೆಯನ್ನು ನೆಲೆಗೊಳಿಸಿದ ಮಹನೀಯರು ವಿಧಿವಶರಾದ ಬಳಕ ಸ್ವಲ್ಪ ಕಾಲ ವಾರ್ಷಿಕ ನೇಮ ನಡೆಯಲಿಲ್ಲ. ಆದರೆ ಇತರ ಪೂಜೆಗಳು ಸಾಂಗವಾಗಿ ನೆರವೇರುತಿದ್ದುವು. 1990ರಲ್ಲಿ ಮಣಿಪಾಲದ ಭಗವತ್ಬಗ್ತರೆಲ್ಲ ಮತ್ತೆ ಬಬ್ಬುಸ್ವಾಮಿಯ ಪ್ರೇರಣೆಯಂತೆ ಒಂದಾಗಿ ಸರ್ವಜಾತಿಯವರನ್ನು ಸೇರಿಸಿಕೊಂಡು ಸಮಿತಿಯೊಂದನ್ನು ರಚಿಸಿ ಕಾಲಾವಧಿಯ ಸೇವೆ ಹಾಗೂ ನೇಮ ನಡೆಯಿತು. 1991ರಲ್ಲಿ ಪೈ ಬಂಧುಗಳು ದೈವಸ್ಥಾನವನ್ನು ಕಟ್ಟಿಕೊಟ್ಟರು. ಬ್ರಹ್ಮಕಲಶಾಭಿಷೇಕ ಮಾಡಿಸಿ ನೇಮವನ್ನು ಸಮಿತಿಯವರು ನಡೆಸಿದರು. ಬಳಿಕ ಪ್ರತೀ ವರ್ಷ ಅನ್ನ ಸಂತರ್ಪಣೆಯೊಂದಿಗೆ ನೇಮ ಹಾಗೂ ಶ್ರೀ ಬಬ್ಬುಸ್ಥಾಮಿಯ ಸಂಕ್ರಮಣ ಪೂಜೆ, ದರ್ಶನ ಸೇವೆಗಳು ಸಂಭ್ರಮದಿಂದ ನಡೆಯಲಾರಂಭಿಸಿತು.
| ಸೇವಾ ವಿವರ | ರೂಪಾಯಿ | |
|---|---|---|
| 1 | ಕರ್ಪೂರ ಆರತಿ | 10/- |
| 2 | ದೇವರ ಅಲಂಕಾರ ಪೂಜೆ (ಹೂ ಪ್ರತ್ಯೇಕ) | 100/- |
| 3 | ಹೂವಿನ ಪೂಜೆ (ದರ್ಶನದ ದಿನ ಮಾತ್ರ) | 500/- |
| 4 |
ವಾಹನ ಪೂಜೆ ಘನ ವಾಹನ ಪೂಜೆ |
50/- 100/- |
| 5 | ರಕ್ಷಾ ಫಲ | 100/- |
| 6 | ಕೃತಿಮ ದೋಷ ಪರಿಹಾರ (ಸಾಮಾನಿನ ಪಟ್ಟಿ ಹೊರತು) | 1,500/- |
| 7 | ಪ್ರೇತ ಬಿಟ್ಟು ಕೊಡುವುದು (ಸಾಮಾನಿನ ಪಟ್ಟಿ ಹೊರತು) | 1,000/- |
| 8 | ಸ್ಪೆಷಲ್ ದರ್ಶನ ಸೇವೆ (ರಾತ್ರಿ) | 37,000/- |
ಬೆಳಿಗ್ಗೆ 6.00 ರಿಂದ 8.00 ಗಂಟೆಯವರೆಗೆ
ಸಾಯಂಕಾಲ 6.00 ರಿಂದ 8.00 ಗಂಟೆಯವರೆಗೆ
ಬೆಳಿಗ್ಗೆ 6.00 ರಿಂದ 12.00 ಗಂಟೆಯವರೆಗೆ
ಸಾಯಂಕಾಲ 6.00 ರಿಂದ 8.00 ಗಂಟೆಯವರೆಗೆ
ವಿ.ಸೂ.: ಭಕ್ತಾದಿಗಳು ತಮ್ಮ ದೇಣಿಗೆಯನ್ನು ಮಣಿಪಾಲ ಭಕ್ತಾದಿಗಳು ತಮ್ಮ ದೇಣಿಗೆಯನ್ನು ಮಣಿಪಾಲ ಕೋ-ಆಪರೇಟಿವ್ ಬ್ಯಾಂಕ್, ಮಣಿಪಾಲ ಇದರ 'ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಣಿಪಾಲ' ಹೆಸರಿನ ಎಸ್.ಬಿ. ಖಾತೆ ಸಂಖ್ಯೆ : 00100021693 ಅಥವಾ ಕರ್ನಾಟಕ ಬ್ಯಾಂಕ್, ಮಣಿಪಾಲ ಶಾಖೆ ಇಲ್ಲಿಯ C. A/c No. 5652000100007701/IFSC code KARB0000565 ಇದಕ್ಕೆ ಕಳುಹಿಸಬೇಕಾಗಿ ವಿನಂತಿ.